ಸೆಪ್ಟೆಂಬರ್ 5 ಭಾನುವಾರದಂದು ಕೃಷ್ಣರಾಜ ಕ್ಷೇತ್ರದ ಬಿಜೆಪಿ ವತಿಯಿಂದ ಮಾನ್ಯ ಶಾಸಕರಾದ ಎಸ್.ಎ ರಾಮದಾಸ್ ಅವರ ನೇತೃತ್ವದಲ್ಲಿ ಬಿ.ಎಲ್.ಎ – 2 ಗಳ ನೇಮಕವಾಗಿದ್ದು, ರಾಜ್ಯದಲ್ಲೇ ಮೊದಲ ಬಾರಿಗೆ ಬಿ.ಎಲ್.ಎ – 2 ಗಳ ಸಮಾವೇಶವು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣ ಮಂಟಪದಲ್ಲಿ ನೆರವೇರಿತು, ಅಲ್ಲದೇ ಐ.ಡಿ ಕಾರ್ಡ್ಗಳನ್ನೂ ಸಹ ಮಾನ್ಯ ರಾಜ್ಯಾಧ್ಯಕ್ಷರು ವಿತರಣೆ ಮಾಡಿದರು.
ಅಧ್ಯಕ್ಷೀಯ ಭಾಷಣವನ್ನು ಮಾಡಿದ ಮಾನ್ಯ ಭಾಜಪಾ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ರಾಜಕಾರಣದಲ್ಲಿ ಆತ್ಮ ಬಿ.ಎಲ್.ಎ 2 ಆಗಿದೆ, ರಾಮದಾಸ್ ಅವರು ಮಾತು ಕಡಿಮೆ ಮಾಡಿ ಕೆಲಸ ಹೆಚ್ಚು ಮಾಡಿ ಬಿ.ಎಲ್.ಎ. 2 ಗಳ ನೇಮಕ ಮಾಡಿದ್ದಾರೆ. ಪ್ರಧಾನ ಮಂತ್ರಿ, ಮುಖ್ಯಮಂತ್ರಿ, ರಾಜ್ಯ ಅಧ್ಯಕ್ಷರ ಮನೆ ಯಿಂದ ಪಾರ್ಟಿ ಬೆಳೆಯುವುದಿಲ್ಲ, ಪಾರ್ಟಿ ಬೆಳೆಯುವುದು ಕಾರ್ಯಕರ್ತರಿಂದ. ಒಂದು ಕಾಲದಲ್ಲಿ ಅಭ್ಯರ್ಥಿಗಳನ್ನು ಹುಡುಕುತ್ತಿದ್ದೇವೆ.
ಕೆ.ಆರ್ ಕ್ಷೇತ್ರದಲ್ಲಿ 11 ಸಾವಿರ ಪೇಜ್ ಪ್ರಮುಖರ ನೇಮಕವಾಗಿದೆ ಮನೆ ಮನೆಯಲ್ಲಿ ಕೆ.ಆರ್ ಕ್ಷೇತ್ರದಲ್ಲಿ ಪಾರ್ಟಿ ಬಹಳ ಸಂಘಟನಾತ್ಮಕವಾಗಿ ಇದೆ. ಕಾಂಗ್ರೆಸ್ ಇಂದು ದೇಶದಲ್ಲಿ ವಿನಾಶದ ಅಂಚಿನಲ್ಲಿದೆ ಆದರೆ ಮನೆ ಮನೆಯಲ್ಲಿ ಕಮಲ ಅರಳುತ್ತಿದೆ. ಕೆ.ಆರ್ ಕ್ಷೇತ್ರವನ್ನು ನೋಡಿ ನಾನು ಹೇಳುತ್ತೇನೆ ಕರ್ನಾಟಕದಲ್ಲಿ ಹಾಗೂ ದೇಶದಲ್ಲಿ ಭಾಜಪಾ ಕ್ಕೆ ವಿನಾಶವೇ ಇಲ್ಲ ಎಂದು. ಇಂದು ಭಾಜಪಾ ಸುಭದ್ರವಾಗಿದೆ ಎಂದರೆ ಅದಕ್ಕೆ ನಮ್ಮ ಕಾರ್ಯ ಪದ್ಧತಿಯೇ ಕಾರಣ. ಸಿದ್ದರಾಮಯ್ಯನವರಿಗೆ ನಾನು ಹೇಳುತ್ತೇನೆ ನಿಮ್ಮ ಊರಿನ ಹತ್ತಿರವೇ ಇರುವ ಕೆ.ಆರ್ ಕ್ಷೇತ್ರಕ್ಕೆ ಬಂದು ನೋಡಿ ಹೇಗೆ ಪಾರ್ಟಿ ಕಟ್ಟಿದ್ದಾರೆ ಎಂದು, ನಿಮಗೆ ಸಾಧ್ಯವಾದರೆ ನಿಮ್ಮ ಒಂದು ಬೂತ್ ನಲ್ಲಿ ಈ ರೀತಿ ಪಾರ್ಟಿಯನ್ನ ಕಟ್ಟಿ. ನಾವು ಮತಗಟ್ಟೆಯನ್ನು ನೆಂಬಿದ್ದೇವೆ, ಆದರೆ ಕಾಂಗ್ರೆಸ್ ಬರೀ ರಾಜಕಾರಣವನ್ನು ನಂಬಿದ್ದಾರೆ.
ಶಾಸಕರಾದ ರಾಮದಾಸ್ ಅವರ ಮನೆ ಮುಂದೆ ನಾಮಫಲಕ ಹಾಕುವ ಕಾರ್ಯ ಇಂದು ಇಡೀ ರಾಜ್ಯದಲ್ಲಿ ವಿಸ್ತಾರ ಆಗಿದೆ. ಬಿ.ಎಲ್.ಎ – 2 ಪಾರ್ಟಿ ಮತ್ತು ಸರ್ಕಾರದ ಕೊಂಡಿಗಳು ನೀವು ಅತ್ಯಂತ ಶ್ರೇಷ್ಠ ಕಾರ್ಯ ಮಾಡುತ್ತಿದ್ದೀರಿ, ನಿಜಕ್ಕೂ ನೀವು ಪುಣ್ಯವಂತರು. ರಾಜ್ಯದ ಎಲ್ಲಾ 80% ನಷ್ಟು ಬೂತ್ಗಳಲ್ಲಿ ಪಂಚ ರತ್ನ ಪೂರ್ಣವಾಗಿದೆ, ಪೇಜ್ ಪ್ರಮುಖರು ಆಯ್ಕೆಯಾಗಿದ್ದಾರೆ ಇದು ನಮ್ಮ ಭಾಜಪಾದ ಶಕ್ತಿ. ರಾಜ್ಯದಲ್ಲಿ ಮೊದಲ ಬಾರಿಗೆ ಬೂತ್ ಅಧ್ಯಕ್ಷರ ಕಾರ್ಯಾಗಾರ, ಪೇಜ್ ಪ್ರಮುಖರ ಕಾರ್ಯಾಗಾರ, ಬೂತ್ ಅಧ್ಯಕ್ಷರ ಮನೆ ಮುಂದೆ ನಾಮಫಲಕ ಅಳವಡಿಸುವ ಕಾರ್ಯ ಪ್ರಪ್ರಥಮವಾಗಿ ಮಾಡಿದ್ದು ಕೆ.ಆರ್ ಕ್ಷೇತ್ರದಲ್ಲಿ. ನಾವು ಸಂಘಟನಾತ್ಮಕವಾಗಿ ಇನ್ನಷ್ಟು ಕಾರ್ಯಪ್ರವೃತ್ತವಾಗಬೇಕಿದೆ. ರಾಷ್ಟ್ರದಲ್ಲಿ ಇನ್ನೊಂದು ಮಾದರಿಯನ್ನು ಕೆ.ಆರ್ ಕ್ಷೇತ್ರದಲ್ಲಿ ಮಾಡಲಾಗಿದೆ ಅದೇ ಕ್ಷೇತ್ರದ 18 ರಿಂದ 25 ವರ್ಷಗಳವರೆಗಿನ ಯುವ ಜನತೆಯನ್ನು ಕರೆದು ರಾಷ್ಟ್ರೀಯತೆಯ ಬಗ್ಗೆ ಚಿಂತನೆಯನ್ನು ತುಂಬುವ ಪ್ರಯೋಗ ಮಾಡಿದ್ದಾರೆ ಇದು ನಿಜಕ್ಕೂ ಪ್ರಶಂಸನೀಯ ಹಾಗೂ ರಾಷ್ಟ್ರಮಟ್ಟದಲ್ಲಿಯೇ ಒಂದು ವಿನೂತನವಾದ ಕಾರ್ಯ.
ರಾಮದಾಸ್ ಅವರ ನೇತೃತ್ವದಲ್ಲಿ ಪಾರ್ಟಿಯನ್ನು ಅದ್ಭುತವಾಗಿ ಕೆ.ಆರ್ ಕ್ಷೇತ್ರದಲ್ಲಿ ಕಟ್ಟಿದ್ದಾರೆ. ಬೂತ್ ಅಧ್ಯಕ್ಷರಾಗಿದ್ದ ಅಮಿತ್ ಶಾ ಭಾಜಪಾದ ರಾಷ್ಟ್ರೀಯ ಅಧ್ಯಕ್ಷರಾಗಿದ್ದರು, ಬೂತ್ ಅಧ್ಯಕ್ಷರಾಗಿ ಕೆಲಸ ಮಾಡಿದ್ದ ವೆಂಕಯ್ಯ ನಾಯ್ಡು ಅವರು ಇಂದು ರಾಷ್ಟ್ರದ ಉಪರಾಷ್ಟ್ರಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಅಂತಹ ಶಕ್ತಿ ಭಾಜಪಾಕ್ಕೆ ಇದೆ. ರಾಮದಾಸ್ ಅವರ ನೇತೃತ್ವದಲ್ಲಿ ಕೆ.ಆರ್ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಘಟನಾತ್ಮಕ ಈ ಮಾದರಿ ಕಾರ್ಯಗಳು ರಾಜ್ಯಕ್ಕೆ ಲಾಭ ಸಿಗಲಿ ಎಂದು ಆಶಿಸುತ್ತೇನೆ ಎಂದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ