ಭಾರತೀಯ ಜನತಾ ಪಾರ್ಟಿ ವತಿಯಿಂದ ಪ್ರತೀ ಬೂತ್ ಅಧ್ಯಕ್ಷರ ಮನೆಗೆ ನಾಮಫಲಕ ಲಗತ್ತಿಸುವ ಅಭಿಯಾನವು ದೇಶದಾದ್ಯಂತ ನಡೆಯುತ್ತಿದ್ದು, ಇದರಂತೆ 19 ಪಚ್ಚನಾಡಿ ವಾರ್ಡ್ನಾದ್ಯoತ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಅವರು ನಾಮ ಫಲಕ ಅಳವಡಿಸುವ ಕಾರ್ಯವನ್ನು ನೆರವೇರಿಸಿದರು.
ಬಂದಲೆ 140 ಬೂತ್ ಅಧ್ಯಕ್ಷರಾದ ಸಂಜೀವ ಕುಂದರ್ ಬಂದಲೆ, ಶಿವಾಜಿ ನಗರ 141 ಬೂತ್ ಅಧ್ಯಕ್ಷರಾದ ಚಂದ್ರಹಾಸ ಕುಲಾಲ್, ವೈದ್ಯ ನಾಥ ನಗರ 142 ಬೂತ್ ಅಧ್ಯಕ್ಷರಾದ ವೆಂಕಟೇಶ್, ಆಶ್ರಯ ನಗರ 143 ಬೂತ್ ಅಧ್ಯಕ್ಷರಾದ ಆರ್ ಕೆ ಶೆಟ್ಟಿ, ಸಂತೋಷ್ ನಗರ 144 ಬೂತ್ ಅಧ್ಯಕ್ಷರಾದ ಜಯಪ್ರಕಾಶ್ (JP), ಮನೆಗೆ ಶಾಸಕರು, ಸ್ಥಳೀಯ ಕಾರ್ಪೊರೇಟರ್ ಸಂಗೀತಾ ಆರ್. ನಾಯಕ್ ಹಾಗೂ ಪಕ್ಷದ ವಿವಿಧ ಜವಾಬ್ದಾರಿಯುಳ್ಳ ಪ್ರಮುಖರೊಂದಿಗೆ ಭೇಟಿ ನೀಡಿ ನಾಮ ಫಲಕ ಅಳವಡಿಸುವ ಕಾರ್ಯವನ್ನು ನೆರವೇರಿಸಿದರು.
ಇವರಿಗೆ ಸ್ಥಳೀಯ ಪಕ್ಷದ ಮುಖಂಡರು, ಬೂತ್ ಪ್ರಮುಖರು, ಕಾರ್ಯಕರ್ತ ಬಂಧುಗಳು ಸಾಥ್ ನೀಡಿದ್ದಲ್ಲದೆ ಕಾರ್ಯಕ್ರಮ ಪೂರ್ತಿ ಹಾಜರಿದ್ದು ಯಶಸ್ವಿ ಅಭಿಯಾನ ವಾಗಲು ಸಹಕರಿಸಿದರು. ಪ್ರತೀ ಬೂತ್ ವತಿಯಿಂದ ಶಾಸಕರನ್ನು ಫಲಪುಷ್ಪ ದೊಂದಿಗೆ ಶಾಲು ಹೊದಿಸಿ ಅಭಿನಂದಿಸಲಾಯಿತು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ