ಬೆಂಗಳೂರು: ಹಿಂದುಳಿದ ವರ್ಗದವರ ಸರ್ವತೋಮುಖ ಅಭಿವೃದ್ಧಿ ಕೆಲಸದ ಬಗ್ಗೆ ಸಚಿವ ಶ್ರೀ ಕೆ.ಎಸ್. ಈಶ್ವರಪ್ಪ ಮತ್ತು ಇತರ ಸಚಿವರ ಜೊತೆ ಚರ್ಚಿಸಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುವುದು. ಹಿಂದುಳಿದ ವರ್ಗದವರ ಮನೆಮನೆಗೆ ಅಂಥ ಕಾರ್ಯಕ್ರಮ ತಲುಪಿಸಲಾಗುವುದು ಎಂದು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ರಾಜ್ಯದ ಬಿಜೆಪಿ ಸರಕಾರದಲ್ಲಿ ಒಬಿಸಿ ಸಮುದಾಯದಿಂದ ಸಚಿವರಾದ ಶ್ರೀ ಕೆ.ಎಸ್.ಈಶ್ವರಪ್ಪ, ಶ್ರೀ ಕೋಟ ಶ್ರೀನಿವಾಸ ಪೂಜಾರಿ, ಶ್ರೀ ಸುನೀಲ್ ಕುಮಾರ್, ಶ್ರೀ ಎಂ.ಟಿ.ಬಿ.ನಾಗರಾಜ್, ಶ್ರೀ ಭೈರತಿ ಬಸವರಾಜ್, ಶ್ರೀ ಮುನಿರತ್ನ ಮತ್ತು ಶ್ರೀ ಆನಂದ್ ಸಿಂಗ್, ಸಂಸದರಾದ ಶ್ರೀ ಪಿ.ಸಿ. ಮೋಹನ್ ಮತ್ತು ರಾಜ್ಯಸಭಾ ಸದಸ್ಯರಾದ ಶ್ರೀ ನಾರಾಯಣ್ ಅವರಿಗೆ ಹಾಗೂ ಒಬಿಸಿ ಸಮುದಾಯದ ಶಾಸಕರಿಗೆ ಗೌರವಾರ್ಪಣೆ ಕಾರ್ಯಕ್ರಮವು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಘಟಕದ ವತಿಯಿಂದ ನಗರದ ಮಲ್ಲೇಶ್ವರದ ಚೌಡಯ್ಯ ಮೆಮೋರಿಯಲ್ ಹಾಲ್‍ನಲ್ಲಿ ಇಂದು ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಬಸವರಾಜ ಬೊಮ್ಮಾಯಿ ಅವರು, ಈ ಹಿಂದೆ ಸಾಮಾಜಿಕ ನ್ಯಾಯ ಶಬ್ದದ ಗರಿಷ್ಠ ಪ್ರಮಾಣದ ದುರುಪಯೋಗವಾಗಿದೆ. ನಿಮ್ಮೆಲ್ಲರಲ್ಲೂ ಬುದ್ಧಿ, ಶಕ್ತಿ, ದೈಹಿಕ ಶಕ್ತಿ ಮತ್ತು ಬುದ್ಧಿಶಕ್ತಿ ಇದೆ. ಸಮನಾದ ಅವಕಾಶ ಕೇಳಿ ಪಡೆಯಿರಿ ಎಂದು ಕಿವಿಮಾತು ಹೇಳಿದರು.
ಬಿಜೆಪಿ ಮತ್ತು ಬಿಜೆಪಿ ಸರಕಾರ ನೈಜ, ಸಾತ್ವಿಕ ಶಕ್ತಿಯಾಗಿ, ಸಾರ್ಥಕತೆಯಿಂದ ಮತ್ತು ಪ್ರಾಮಾಣಿಕವಾಗಿ ಹಿಂದುಳಿದ ವರ್ಗದವರ ಪರ ನಿಲ್ಲಲಿದೆ ಎಂದು ಅವರು ತಿಳಿಸಿದರು. ನ್ಯಾಯ ಸಿಗುವ ರೀತಿಯಲ್ಲಿ ಸಂಘಟನೆ ಮಾಡುವಂತೆ ಅವರು ಸಲಹೆ ನೀಡಿದರು.
ಸಚಿವ ಶ್ರೀ ಸುನೀಲ್‍ಕುಮಾರ್ ಅವರು ಮಾತನಾಡಿ, ಇದು ಪಕ್ಷಕ್ಕೆ ಸಂದ ಗೌರವ ಎಂದು ಅಭಿಪ್ರಾಯಪಟ್ಟರು. ಬೇರೆ ಪಕ್ಷಗಳು ರಾಜಕಾರಣಕ್ಕಾಗಿ ಜಾತಿಯನ್ನು ಬಳಸಿಕೊಂಡಿದೆ ಎಂದು ತಿಳಿಸಿದರು. ಸಾಮಾಜಿಕ ಪರಿವರ್ತನೆಯ ಪರಿಕಲ್ಪನೆಯಡಿ ಬಿಜೆಪಿ ಕಾರ್ಯನಿರ್ವಹಿಸುತ್ತಿದೆ ಎಂದರು. ಹಿಂದುಳಿದ ವರ್ಗದವರಿಗಾಗಿ ಕೈಗೊಂಡ ವಿಶಿಷ್ಟ ನಿರ್ಣಯಗಳನ್ನು ಅವರು ಶ್ಲಾಘಿಸಿದರು.
ಸನ್ಮಾನಿತರಾದ ಸಂಸದರಾದ ಶ್ರೀ ಪಿ.ಸಿ.ಮೋಹನ್ ಅವರು ಮಾತನಾಡಿ, ಹಿಂದೆ ಸಿದ್ದರಾಮಯ್ಯ ಸೇರಿದಂತೆ ಎಲ್ಲರೂ ಒಬಿಸಿಯ ಸಮುದಾಯವನ್ನು ಈ ಜನರನ್ನು ಮತಬ್ಯಾಂಕ್ ಆಗಿ ಪರಿಗಣಿಸಿದ್ದರು. ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗರಿಷ್ಠ ಪ್ರಮಾಣದ ಸಚಿವರ ಸ್ಥಾನವನ್ನು ಒಬಿಸಿ ಸಮುದಾಯಕ್ಕೆ ನೀಡಿದ್ದಾರೆ. ಬಿಜೆಪಿ ದಿನೇದಿನೇ ದೊಡ್ಡ ಪಕ್ಷವಾಗಿ ಬೆಳೆಯುತ್ತಿದೆ ಎಂದು ನುಡಿದರು. ಬಿಜೆಪಿ, ಒಬಿಸಿಯ ಹಿತೈಷಿಯಾಗಿದೆ ಎಂದರು.
ಶಾಸಕರಾದ ಶ್ರೀ ತಿಪ್ಪಾರೆಡ್ಡಿ ಅವರು ಮಾತನಾಡಿ, ಬಿಜೆಪಿ, ಹಿಂದುಳಿದ ವರ್ಗದವರಿಗೆ ಗರಿಷ್ಠ ಅವಕಾಶ ನೀಡಿದೆ. ಮುಂದಿನ ಬಾರಿ ಅಸೆಂಬ್ಲಿಯಲ್ಲಿ ಬಿಜೆಪಿ ಅಧಿಕಾರ ಪಡೆಯಲು ಎಲ್ಲ ವರ್ಗದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ಶ್ರೀ ನಳಿನ್ ಕುಮಾರ್ ಕಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಸಿ.ಟಿ ರವಿ, ಬಿಜೆಪಿ ಒ.ಬಿ.ಸಿ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರು ಮತ್ತು ರಾಜ್ಯಸಭಾ ಸದಸ್ಯರಾದ ಡಾ.ಲಕ್ಷ್ಮಣ್, ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಯಶ್‍ಪಾಲ್ ಸುವರ್ಣ, ಒ.ಬಿ.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರಾದ ಶ್ರೀ ನೆ.ಲ. ನರೇಂದ್ರಬಾಬು ಅವರು ಭಾಗವಹಿಸಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ