ಬೆಂಗಳೂರು : ಏನಮ್ಮಾ ಹೇಗಿದ್ದೀರಿ ? ಆರೋಗ್ಯ ಚನ್ನಾಗಿದೆಯಾ.ಈ ವಯಸ್ಸಿನಲ್ಲಿ ನಿಮ್ಮಂಥ ಹಿರಿಯರು ನಮ್ಮಂಥವರನ್ನು ಸದಾಕಾಲ ಆಶೀರ್ವದಿಸುತ್ತೀರಬೇಕು…
ಹೀಗೆ 80 ವರ್ಷದ ಹಿರಿಯ ಮಹಿಳೆಯನ್ನು ಅಬಕಾರಿ ಸಚಿವ ಕೆ.ಗೋಪಾಲಯ್ಯ ಅವರು ಇಂದು ಆತ್ಮೀಯವಾಗಿ ಮಾತನಾಡಿಸಿದ್ದು ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ.
ಬೆಂಗಳೂರಿನ ಮಹಾಲಕ್ಷ್ಮಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಶಕ್ತಿ ಗಣಪತಿ ನಗರ ವಾರ್ಡ್ ನಲ್ಲಿ ಸಮ್ಯತ ಫೌಂಡೇಶನ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಮತ್ತು ಉಚಿತ ಔಷಧಿ ವಿತರಣೆ ಕಾರ್ಯಕ್ರಮದಲ್ಲಿ ಆರೋಗ್ಯ ತಪಾಸಣೆಗೆ ಆಗಮಿಸಿದ್ದ 80 ರ ವಯೋಮಾನದ ಹಿರಿಯ ಜೀವ ಗಂಗಮ್ಮ ಅವರ ಬಳಿಗೆ ತೆರಳಿದ ಸಚಿವರು ಅವರ ಆರೋಗ್ಯ ವಿಚಾರಿಸಿ ಮೊದಲು ಹಿರಿಯರನ್ನು ತಪಾಸಣೆ ಮಾಡುವಂತೆ ಕಾರ್ಯಕರ್ತರಿಗೆ ಸೂಚನೆ ನೀಡಿದರು.
ಈ ವೇಳೆ ಸಾವಿರಕ್ಕೂ ಅಧಿಕ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡು ಉಚಿತ ಔಷಧಿ ಪಡೆದರು. ಈ ಸಂದರ್ಭದಲ್ಲಿ ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಶ್ರೀನಿವಾಸ್, ವಾರ್ಡ್ ಅಧ್ಯಕ್ಷ ಬಿಟಿ ಶ್ರೀನಿವಾಸ್ ಜಗದೀಶ್, ಜಯಸಿಂಹ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ