ಬೆಂಗಳೂರು : ಮೀನುಗಾರಿಕಾ ದೋಣಿಗಳಿಗೆ 2021-22ನೇ ಸಾಲಿನಲ್ಲಿ ಜನವರಿ ಮಾಹೆಯಿಂದ ಮಾರ್ಚ್ ತಿಂಗಳವರೆಗೆ ಅವಶ್ಯಕತೆ ಇರುವ 50 ಸಾವಿರ ಕಿ.ಲೀ. ಪ್ರಮಾಣದಷ್ಟು ಹೆಚ್ಚುವರಿ ಕರ ರಹಿತ ಡೀಸೆಲನ್ನು ಬಿಡುಗಡೆಗೊಳಿಸಿ ಡೀಸೆಲ್ ಡೆಲಿವರಿ ಪಾಯಿಂಟ್ ನಲ್ಲಿ ವಿತರಿಸುವಂತೆ ಶಾಸಕ ಕೆ. ರಘುಪತಿ ಭಟ್ ಹಾಗೂ ಮೀನುಗಾರರ ನಿಯೋಗದೊಂದಿಗೆ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾರಾದ ಎಸ್. ಅಂಗಾರ ಅವರ ನೇತೃತ್ವದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಮೀನುಗಾರಿಕಾ ದೋಣಿಗಳಿಗೆ 2021-22 ನೇ ಸಾಲಿನಿಂದ ಡೀಸೆಲ್ ಡೆಲಿವರಿ ಪಾಯಿಂಟ್‌ನಲ್ಲಿ ಕರ ರಹಿತ ದರದಲ್ಲಿ ಡೀಸೆಲನ್ನು ವಿತರಣೆಗೊಳಿಸುವ ಬಗ್ಗೆ ಹಿಂದಿನ ಆಯವ್ಯಯದಲ್ಲಿ ಘೋಷಿಸಿರುವಂತೆ ಡೀಸೆಲ್ ವಾರ್ಷಿಕ ಮಿತಿಯನ್ನು 1.125 ಲಕ್ಷ ಕಿಲೋ ಲೀಟರ್ ಪ್ರಮಾಣವನ್ನು ನಿಗಧಿಪಡಿಸಿ ಆಗಸ್ಟ್ ಮಾಹೆಯಿಂದ ಕರ ರಹಿತ ಡೀಸೆಲ್ ವಿತರಿಸಲು ಆದೇಶಿಸಿರುವಂತೆ ಆಗಸ್ಟ್ ಮಾಹೆಯಿಂದ ನವಂಬರ್ ಮಾಹೆವರೆಗೆ 81680.00 ಕಿಲೋ ಲೀಟರ್ ಡೀಸೆಲ್ ಮೂರು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಈ ಪ್ರಮಾಣವು ಡಿಸೆಂಬರ್ ವರೆಗೆ ಮಾತ್ರ ಸಾಕಾಗಿದ್ದು, ಪ್ರಸ್ತುತ ಜನವರಿ ಮಾಹೆಯಿಂದ ಮಾರ್ಚ್ ಮಾಹೆವರೆಗೆ ವಿತರಿಸಲು ಡೀಸೆಲ್ ಲಭ್ಯವಿರುವುದಿಲ್ಲ. ಈ ನಿಟ್ಟಿನಲ್ಲಿ ಜನವರಿ ತಿಂಗಳಿನಿಂದ ಮಾರ್ಚ್ ತಿಂಗಳವರೆಗೆ ಅವಶ್ಯಕತೆ ಇರುವ 50,000 ಕಿಲೋ ಲೀಟರ್ ಪ್ರಮಾಣದಷ್ಟು ಹೆಚ್ಚುವರಿ ಕರ ರಹಿತ ಡೀಸೆಲನ್ನು ಬಿಡುಗಡೆಗೊಳಿಸುವ ಬಗ್ಗೆ ಮನವಿ ಸಲ್ಲಿಸಿದರು.
ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟ ಶೀನಿವಾಸ ಪೂಜಾರಿ, ಶಾಸಕ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಸುನೀಲ್ ವಿ. ನಾಯ್ಕ್, ಮೀನುಗಾರರ ಮುಖಂಡರು ಉಪಸ್ಥಿತರಿದ್ದರು.
You may also like
-
ರಾಜ್ಯ ಹೈಕೋರ್ಟ್ ಸಿದ್ದರಾಮಯ್ಯನವರನ್ನು ಆರೋಪಮುಕ್ತರನ್ನಾಗಿ ಮಾಡಿಲ್ಲ: ವಿಜಯೇಂದ್ರ
-
ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ – ವಿಜಯೇಂದ್ರ
-
ಎಲ್ಲ ವರ್ಗದ ಜನರನ್ನು ಮನಸ್ಸಿನಲ್ಲಿಟ್ಟ ಅತ್ಯುತ್ತಮ ಬಜೆಟ್ : ಮೋಹನ್ ವಿಶ್ವ
-
ಹಾಪ್ ಕಾಮ್ಸ್ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ರೈತ ಮೋರ್ಚಾ ಪ್ರತಿಭಟನೆ
-
ಕಾಂಗ್ರೆಸ್ ಸರಕಾರದ ಹಗೆತನದ ಪರಮಾವಧಿಯ ರಾಜಕಾರಣಕ್ಕೆ ಬಿಜೆಪಿ ಆಕ್ಷೇಪ