Notice: Function _load_textdomain_just_in_time was called incorrectly. Translation loading for the og domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121

Notice: Function _load_textdomain_just_in_time was called incorrectly. Translation loading for the wp-post-author domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home3/buntss5v/iambjp.in/wp-includes/functions.php on line 6121
ಮೋದಿಜಿ ಅತ್ಯುತ್ತಮ ಆಡಳಿತದಿಂದ ವೇಗದ ಅಭಿವೃದ್ಧಿ: ಮೀನಾಕ್ಷಿ ಲೇಖಿ – I am BJP
May 6, 2025

ಮೋದಿಜಿ ಅತ್ಯುತ್ತಮ ಆಡಳಿತದಿಂದ ವೇಗದ ಅಭಿವೃದ್ಧಿ: ಮೀನಾಕ್ಷಿ ಲೇಖಿ

ಬೆಂಗಳೂರು: ಬಡವರು, ರೈತರು ಮತ್ತು ಅವಕಾಶ ವಂಚಿತರಿಗೆ ಸಮರ್ಪಿತ ಸರಕಾರ ತಮ್ಮದೆಂದು ನರೇಂದ್ರ ಮೋದಿಜಿ ತಿಳಿಸಿದ್ದಾರೆ. ಉತ್ತಮ ಆಡಳಿತದ ಮೂಲಕ ವೇಗದ ಅಭಿವೃದ್ಧಿ ಸಾಧ್ಯವಾಗಿದೆ ಎಂದು ಕೇಂದ್ರ ಸಚಿವರಾದ ಶ್ರೀಮತಿ ಮೀನಾಕ್ಷಿ ಲೇಖಿ ಎಂದು ಅವರು ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 9 ವರ್ಷಗಳಲ್ಲಿ ಅಭಿವೃದ್ಧಿಯ ಭಾರಿ ಸಾಹಸವನ್ನು ಸಾಕಾರಗೊಳಿಸಿದ್ದಾರೆ. ನಿರಂತರ ಅಭಿವೃದ್ಧಿ ವಿಚಾರದಲ್ಲಿ ಭಗೀರಥ ಪ್ರಯತ್ನ ಅವರದಾಗಿತ್ತು ಎಂದರು.

ಸೆಂಗೋಲ್ ಇದೆಯೆಂದು ಯಾರಿಗೂ ತಿಳಿದಿರಲಿಲ್ಲ. ಮೋದಿಜಿ ಅವರು ನಾಗರಿಕತೆಯ ಜಾಗೃತಿ ಕುರಿತು ಹೆಮ್ಮೆಯನ್ನು ಮೂಡಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಅವಧಿಯಲ್ಲಿ ವಿವಿಧ ಅಭಿವೃದ್ಧಿ ಹೊಂದಿದ ದೇಶಗಳು ಆರ್ಥಿಕ ಸಮಸ್ಯೆಗೆ ಸಿಲುಕಿದ್ದವು. ಆದರೆ, ಗರಿಷ್ಠ ಜನಸಂಖ್ಯೆ ಹೊಂದಿದ ಭಾರತದಲ್ಲಿ ಮೋದಿಜಿ ಅವರ ಕರ್ತವ್ಯನಿಷ್ಠೆಯ ಪರಿಣಾಮವಾಗಿ ಉಚಿತ ಲಸಿಕೆ ಲಭಿಸಿತು. ಆದರೆ, ವಿಪಕ್ಷಗಳು ವಿದೇಶಿ ಲಸಿಕೆಗಳನ್ನು ಇಲ್ಲಿ ಬಿಕರಿ ಮಾಡಬೇಕೆಂದು ಆಶಿಸಿದ್ದವು ಎಂದು ಟೀಕಿಸಿದರು.

ಲಸಿಕೆ ಉತ್ಪಾದನೆಗೆ ಪ್ರೋತ್ಸಾಹ ಕೊಡಲಾಯಿತು. ಹಿರಿಯ ನಾಗರಿಕರಿಗೆ ಆದ್ಯತೆ ಕೊಡಲಾಗಿತ್ತು. ಎಲ್ಲರಿಗೆ ಲಸಿಕೆ ಕೊಡಲು 20 ವರ್ಷ ಬೇಕೆಂಬ ಕೂಗಿತ್ತು. ಆದರೆ, ಒಂದೆರಡು ವರ್ಷಗಳಲ್ಲಿ ಅದನ್ನು ಈಡೇರಿಸಲಾಗಿದೆ ಎಂದು ತಿಳಿಸಿದರು. ಪ್ರಧಾನಿಯವರ ಬದ್ಧತೆಯನ್ನು ಅದು ಅನಾವರಣಗೊಳಿಸಿದೆ ಎಂದು ವಿವರಿಸಿದರು.

ಭಾರತ ದೂರದೃಷ್ಟಿ ಇರುವ ದೇಶವಾಗಿ ಬೆಳೆದಿದೆ. ಕಟ್ಟಿಗೆ, ನೀರು, ಶೌಚಾಲಯದ ಸಮಸ್ಯೆಗಳನ್ನು ಪರಿಹರಿಸಿದ ದೂರದೃಷ್ಟಿಯ ನಾಯಕ ಮೋದಿಜಿ. ಮಹಿಳೆಯರ ಸಮಸ್ಯೆಗಳ ಪರಿಹಾರಕ್ಕೆ ಅವರು ಆದ್ಯತೆ ಕೊಟ್ಟಿದ್ದಾರೆ. ಪಾರ್ಲಿಮೆಂಟ್ ಹೌಸ್ ಒಂದೆಡೆ ಕಟ್ಟಿಸಿದ ಮೋದಿಜಿ ಅವರು, ಇನ್ನೊಂದೆಡೆ ಉಜ್ವಲ, ಜನ್‍ಧನ್ ಖಾತೆ, ಆಯುಷ್ಮಾನ್ ಯೋಜನೆ, ಸ್ಯಾನಿಟರಿ ಪ್ಯಾಡ್ ವಿತರಣೆಯಂಥ ಯೋಜನೆಗಳನ್ನೂ ಅನುಷ್ಠಾನಕ್ಕೆ ತಂದಿದ್ದಾರೆ ಎಂದರು.

ವೇಗವಾಗಿ, ಸಕಾಲದಲ್ಲಿ ಯೋಜನೆಗಳ ಜಾರಿ ಆಗಿದೆ. ಹಿಂದೆ ಗರೀಬಿ ಹಠಾವೋ ಕೇವಲ ಮಾತಿನಲ್ಲಿತ್ತು. ಬಡತನ ದೂರ ಆಗಿರಲಿಲ್ಲ. ಭ್ರಷ್ಟಾಚಾರ ಹೆಚ್ಚಾಗಿತ್ತು. ಬಡತನ ದೂರ ಮಾಡಲು ಬಳಸುವ ಹಣ ಕೆಲವರ ಜೇಬು ಸೇರುತ್ತಿತ್ತು ಎಂದು ಟೀಕಿಸಿದರು. ಪ್ರಧಾನಿಯವರು ಆರಂಭದಲ್ಲಿ ಜನ್‍ಧನ್ ಬ್ಯಾಂಕ್ ಖಾತೆ ಯೋಜನೆ ಆರಂಭಿಸಿದರು. ಆದರೆ, ಅದರ ಕುರಿತು ಋಣಾತ್ಮಕ ಮಾತುಗಳಿದ್ದವು. 100 ಕೋಟಿ ಜನರಿಗೆ ಕೇವಲ 12 ಕೋಟಿ ಬ್ಯಾಂಕ್ ಖಾತೆಗಳಿದ್ದ ದಿನಗಳವು ಎಂದು ವಿವರ ನೀಡಿದರು.

ಬಡವರು, ಬಡ ವ್ಯಾಪಾರಿಗಳು ಬ್ಯಾಂಕ್ ವ್ಯಾಪ್ತಿಗೆ ಬರುವಂತಾಯಿತು. ಅವರ ಹಣವೂ ಬ್ಯಾಂಕಿಗೆ ಬರುವಂತಾಗಿದೆ. ಅವರಿಗೆ ವಿಮೆ, ಸ್ವಾಸ್ಥ್ಯದ ಯೋಜನೆಗಳು ತಲುಪಿದವು. ಇದು ದೂರದೃಷ್ಟಿಯ ಪರಿಣಾಮ ಎಂದು ತಿಳಿಸಿದರು. ಗತಿಶಕ್ತಿ ಯೋಜನೆಯಿಂದ ಆಗಿರುವ ಲಾಭಗಳ ಕುರಿತು ಅವರು ಬೆಳಕು ಚೆಲ್ಲಿದರು.

ಬೆಂಗಳೂರು- ಮೈಸೂರು ದಶಪಥ ರಸ್ತೆಯನ್ನು ದಾಖಲೆ ಅವಧಿಯಲ್ಲಿ ಭ್ರಷ್ಟಾಚಾರರಹಿತವಾಗಿ ಪೂರ್ಣಗೊಳಿಸಲಾಗಿದೆ. 4 ಲಕ್ಷ ಕಿಮೀ ಹೈವೇ ರಸ್ತೆ ನಿರ್ಮಾಣ ಮಾಡಲಾಗಿದೆ. 2014ರಲ್ಲಿ ಕೆಲವು ಪ್ರದೇಶಗಳಲ್ಲಿ ಹೈವೇಗಳನ್ನು ಅಭಿವೃದ್ಧಿ ಪಡಿಸುತ್ತಿರಲಿಲ್ಲ. ಇದೀಗ ಅದು ಎಲ್ಲ ಕಡೆ ನಡೆದಿದೆ. 13 ಕೋಟಿ ಮನೆಗಳಿಗೆ ನಳ್ಳಿನೀರು ಕೊಡಲಾಗಿದೆ. ಇದು ಈಗಿನ ಪರಿಸ್ಥಿತಿ ಎಂದು ತಿಳಿಸಿದರು.

75 ಸಾವಿರ ಅಮೃತ ಸರೋವರ ನಿರ್ಮಾಣದ ಮೂಲಕ ಅಂತರ್ಜಲ ಹೆಚ್ಚಿಸುವ ಯೋಜನೆಯನ್ನು ಪ್ರಧಾನಿಯವರು ಅಮೃತ ಕಾಲದಲ್ಲಿ ಜಾರಿಗೊಳಿಸಲಿದ್ದಾರೆ. ಇದು ನಿಜವಾದ ದೂರದೃಷ್ಟಿ ಎಂದು ವಿವರಿಸಿದರು. ಶೇ 60 ಯುವಜನರು ಇಲ್ಲಿದ್ದಾರೆ. ಯುವಜನರಿಗೆ ಎನ್‍ಇಪಿ ಜಾರಿ ಮಾಡಲಾಗಿದೆ. ಮಹಿಳೆಯರಿಗೂ ಸ್ಟಾರ್ಟಪ್ ಗಳಲ್ಲಿ ಅವಕಾಶ ಲಭಿಸಿದೆ ಎಂದು ನುಡಿದರು. ರಾಮಮಂದಿರ ನಿರ್ಮಾಣ ಸೇರಿದಂತೆ ಸಂಸ್ಕೃತಿಯ ವಿಚಾರದಲ್ಲೂ ಭಾರತವು ಮುನ್ನಡೆ ಸಾಧಿಸಿದೆ ಎಂದು ವಿಶ್ಲೇಷಿಸಿದರು.

ಈಶಾನ್ಯ ರಾಜ್ಯಗಳಲ್ಲಿ ಬಾಕಿ ಉಳಿದಿದ್ದ ಪ್ರಮುಖ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮಹಿಳೆಯರಿಗೆ ಎಲ್ಲ ಅವಕಾಶ ಕಲ್ಪಿಸಲಾಯಿತು. ಯೆಮನ್, ಸಿರಿಯ, ನೇಪಾಲ, ಸುಡಾನ್, ಅಫಘಾನಿಸ್ತಾನ ಮೊದಲಾದ ಕಡೆ ಸಂಘರ್ಷ ಉಂಟಾದಾಗ ಪ್ರಧಾನಿಯವರು ಭಾರತೀಯರ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಇದು ನೈಜ ಬದಲಾವಣೆ ಎಂದು ನುಡಿದರು. ಜಿ 20, ವಿದೇಶಗಳಿಗೆ ಪ್ರಧಾನಿಯವರ ಭೇಟಿ ಮೊದಲಾದವು ಭಾರತದ ಬಗ್ಗೆ ಇದ್ದ ಅಭಿಪ್ರಾಯವನ್ನು ಬದಲಿಸಿವೆ. ಹೆಚ್ಚು ವಿದೇಶಿ ಹೂಡಿಕೆ ನಮ್ಮಲ್ಲಿಗೆ ಬರುವಂತಾಗಿದೆ ಎಂದು ತಿಳಿಸಿದರು.

ಹೊಸ ಪಾರ್ಲಿಮೆಂಟ್ ಭವನವು ನಮ್ಮ ಹೆಮ್ಮೆಯ ಕಟ್ಟಡ. ಹೊಸ ತಂತ್ರಜ್ಞಾನಕ್ಕೆ ಉದಾಹರಣೆ ಇದಾಗಿದೆ. ಭಾರತದ ಸಂಸ್ಕøತಿಯ ಅತ್ಯುತ್ತಮ ವಿಚಾರಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ರಾಜದಂಡದ (ಸೆಂಗೋಲ್) ಪ್ರತಿಷ್ಠಾಪನೆಯೂ ಆಗಿದೆ ಎಂದು ಅವರು ಹೇಳಿದರು.

ರಾಜ್ಯದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, ನೆಚ್ಚಿನ ನಾಯಕರು ಹಾಗೂ ವಿಶ್ವಮಾನ್ಯ ನಾಯಕ ನರೇಂದ್ರ ಮೋದಿಜಿ ಅವರ ಸರಕಾರ 9 ವರ್ಷ ಪೂರ್ಣಗೊಳಿಸಿದೆ. 9 ವರ್ಷ ರಾಷ್ಟ್ರದಲ್ಲಿ ಬಹಳಷ್ಟು ಬೆಳವಣಿಗೆ, ಬದಲಾವಣೆ ಆಗಿದೆ. ದೇಶವು ಬಹಳ ಕ್ಷೇತ್ರಗಳಲ್ಲಿ ಮುನ್ನಡೆದಿದೆ. ಪ್ರತಿಯೊಬ್ಬ ನಾಗರಿಕನ ಬದುಕಿನಲ್ಲೂ ಬಹಳ ದೊಡ್ಡ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಬದಲಾವಣೆ- ಉನ್ನತೀಕರಣ ಆಗಿದೆ ಎಂದು ತಿಳಿಸಿದರು.

ಮೋದಿಜಿ ಅವರು ಅಧಿಕಾರ ಪಡೆದ ಸಂದರ್ಭದಲ್ಲಿ ಭಾರತದ ಆರ್ಥಿಕ ಪ್ರಗತಿ ಕುಂಠಿತವಾಗಿತ್ತು ಸ್ಪಷ್ಟ ನೀತಿ ಇರಲಿಲ್ಲ. ಭಾರತದ ವಿಶ್ವಾಸಾರ್ಹತೆ ಬಹಳ ಕೆಳಮಟ್ಟಕ್ಕೆ ಕುಸಿದಿತ್ತು. ಇಂಥ ಹಿನ್ನೆಲೆಯೊಂದಿಗೆ ಅಧಿಕಾರ ಪಡೆದ ಮೋದಿಜಿ ಅವರು, ಗುಜರಾತ್ ಸಿಎಂ ಆಗಿದ್ದಾಗಿನ ಅನುಭವ, ರಾಷ್ಟ್ರವನ್ನು ಅರಿತುಕೊಂಡ ಹಿನ್ನೆಲೆಯಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಸಾಮಾಜಿಕ ಶೈಕ್ಷಣಿಕ ಸುಧಾರಣೆÉ, ಆಂತರಿಕ- ಬಾಹ್ಯ ಸುರಕ್ಷತೆಗೆ ಅವರು ಒತ್ತು ಕೊಟ್ಟರು. ರಾಷ್ಟ್ರದ ಸಮಗ್ರತೆ, ಸುರಕ್ಷತೆ, ಏಕತೆ ಕಾಪಾಡಿದರು. ಕಾಶ್ಮೀರವನ್ನು ದೇಶದ ಜೊತೆ ಮರುಜೋಡಣೆ ಮಾಡಿದ್ದಾರೆ. ಜಿಎಸ್‍ಟಿ ಜಾರಿ ಮಾಡಲಾಯಿತು. ಕರ್ನಾಟಕದ ಜಿಎಸ್‍ಟಿ ಸಂಗ್ರಹದಲ್ಲಿ ಆದಾಯ ಹೆಚ್ಚಾಗಿದೆ. ರಾಷ್ಟ್ರದ ಆರ್ಥಿಕತೆ ಬೆಳವಣಿಗೆ, ಆರ್ಥಿಕವಾಗಿ ಹೆಚ್ಚು ಹಂಚಿಕೆ ಸಾಧ್ಯವಾಗಿದೆ ಎಂದರು.

ನೀತಿ ಆಯೋಗ ಮಾಡಿದ್ದು, ಕಳೆದ 7 ವರ್ಷದಿಂದ 8ರಿಂದ 10 ಸಾವಿರ ಕೋಟಿ ಹೆಚ್ಚುವರಿ ಬರುತ್ತಿದೆ. ಹೊಸ ಶಿಕ್ಷಣ ನೀತಿ (ಎನ್‍ಇಪಿ) ಅನುಷ್ಠಾನಕ್ಕೆ ತರಲಾಗಿದೆ. ಮಕ್ಕಳನ್ನು ಸ್ಪರ್ಧಾತ್ಮಕವಾಗಿ ತಯಾರು ಮಾಡಲು ಇದು ಪೂರಕ ಎಂದು ವಿವರಿಸಿದರು. ಕರ್ನಾಟಕವು ಎನ್‍ಇಪಿಯನ್ನು ಮೊದಲು ಅನುಷ್ಠಾನಕ್ಕೆ ತಂದಿದೆ. ಹಲವಾರು ಹೊಸ ವಿಚಾರಗಳನ್ನು ಅದು ಒಳಗೊಂಡಿದೆ ಎಂದು ತಿಳಿಸಿದರು.

ಸಾಮಾಜಿಕವಾಗಿ -ಆರ್ಥಿಕ ಹಿನ್ನಡೆ ಇರುವವರಿಗೆ ಶೇ 10 ಮೀಸಲಾತಿ ಕೊಡಲಾಗಿದೆ. ಒಬಿಸಿ ಕಮಿಷನ್‍ಗೆ ಸಾಂವಿಧಾನಿಕ ಮನ್ನಣೆ ಕೊಡಲಾಗಿದೆ. ಅವರ ಯೋಜನೆಗಳಿಂದ ಕರ್ನಾಟಕಕ್ಕೆ ಗರಿಷ್ಠ ಪ್ರಯೋಜನ ಲಭಿಸಿದೆ. ಅತಿ ಹೆಚ್ಚು ರಾಷ್ಟ್ರೀಯ ಹೆದ್ದಾರಿ ಕಿಮೀ 5 ಸಾವಿರ ಕಿಮೀ ಮಂಜೂರಾಗಿ ಮುಗಿಯುವ ಹಂತ ತಲುಪಿದೆ. ಬೆಂಗಳೂರು ಮೆಟ್ರೊ, ಸಬರ್ಬನ್ ರೈಲಿಗೆ 15 ಸಾವಿರ ಕೋಟಿ ಕೊಟ್ಟಿದ್ದಾರೆ ಎಂದು ತಿಳಿಸಿದರು.

ಹಣಕಾಸು ಆಯೋಗದ 5 ಸಾವಿರ ಕೋಟಿ ಮಧ್ಯಂತರ ವರದಿಯಲ್ಲಿತ್ತು. ಅದರ ಪರಿಣಾಮವಾಗಿ ಸಬರ್ಬನ್ ರೈಲಿಗೆ ವಿಶೇಷ ಅನುದಾನ ಸಿಕ್ಕಿದೆ. ಅಪ್ಪರ್ ಭದ್ರಾಗೆ 5,130 ಕೋಟಿ ನೀಡಿದ್ದಾರೆ ಎಂದು ವಿವರ ನೀಡಿದರು. ರೈಲ್ವೆ ಬಜೆಟ್‍ನಡಿ 7500 ಕೋಟಿ ಲಭಿಸಿದೆ. ಇದಲ್ಲದೆ ನಮಗೆ ಬೆಂಗಳೂರು ಮೈಸೂರು ಹೈವೇ, 4 ವೈದ್ಯಕೀಯ ಕಾಲೇಜು ಕೊಟ್ಟಿದ್ದಾರೆ. ಒಂದು ಐಐಟಿ, ಮಂಗಳೂರು ಕಾರವಾರ ಪೋರ್ಟ್ ವಿಸ್ತರಣೆ ನಡೆಯಲಿದೆ ಎಂದರು.

12,030 ಕೋಟಿ ಅನುದಾನವು ಕರಾವಳಿ ಪ್ರದೇಶ ಅಭಿವೃದ್ಧಿಗಾಗಿ ಲಭಿಸಿದೆ. ಉದ್ಯೋಗ ದೃಷ್ಟಿಯಿಂದ ಜವಳಿ ಪಾರ್ಕ್ ಸಿಕ್ಕಿದೆ. 1 ಲಕ್ಷ ಜನರಿಗೆ ಉದ್ಯೋಗ ಸಿಗಲಿದೆ ಎಂದು ತಿಳಿಸಿದರು. ಈ ವಿಷಯದಲ್ಲಿ ರಾಜಕಾರಣ ಮಾಡಿದರೆ ರಾಜ್ಯದ ಜನತೆಗೆ ಲುಕ್ಸಾನು ಆಗಲಿದೆ ಎಂದು ನುಡಿದರು. ಕರ್ನಾಟಕದ ಜನರು ಮೋದಿಜಿ ಅವರಿಗೆ ಅಭಾರಿ ಆಗಿದ್ದಾರೆ ಎಂದರು.

ರೈತ ಸಮ್ಮಾನ್ ಯೋಜನೆಯಡಿ 54 ಲಕ್ಷ ರೈತರಿಗೆ ನೇರವಾಗಿ ಹಣ ಸಿಗುತ್ತಿದೆ. 1.5 ಕೋಟಿ ಆಯುಷ್ಮಾನ್ ಕಾರ್ಡ್ ಕರ್ನಾಟಕಕ್ಕೆ ಸಿಕ್ಕಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 17 ಲಕ್ಷ ಮನೆಗಳ ಮಂಜೂರಾತಿ ಹಿಂದಿನ ಸರಕಾರದ ಅವಧಿಯಲ್ಲಿ ತಡೆಹಿಡಿದಿದ್ದು, ಅವುಗಳಿಗೆ ನಾವು ಒಪ್ಪಿಗೆ ಕೊಟ್ಟಿದ್ದೇವೆ. 9 ವರ್ಷಗಳ ಬದಲಾವಣೆ ಬಹಳ ಪ್ರಮುಖವಾಗಿದ್ದು, ವಿಶ್ವದಲ್ಲಿ ಭಾರತಕ್ಕೆ ಮನ್ನಣೆ ಲಭಿಸಿದೆ ಎಂದು ನುಡಿದರು.

ಮುದ್ರಾ ಯೋಜನೆಯಡಿ 60 ಲಕ್ಷ ಜನರಿಗೆ ಪ್ರಯೋಜನವಾಗಿದೆ. ರೈತರಿಗೆ ಎಂಎಸ್‍ಪಿ ಹಳೆಯ ಮಾನದಂಡ ಇತ್ತು. 300 ಪಟ್ಟು ದರ ಹೆಚ್ಚಾಗಿದೆ. ಅತಿ ಹೆಚ್ಚು ಬೆಂಬಲ ಬೆಲೆ ಸಿಗುತ್ತಿದೆ. ಅತಿವೃಷ್ಟಿ ಪರಿಹಾರ ಮಾನದಂಡವೂ ಹಳೆಯದಾಗಿತ್ತು. ಅದನ್ನು ಹೆಚ್ಚಿಸಿದ್ದು, ಕುಸಿದ ಮನೆ, ಬೇಸಾಯಗಾರರಿಗೆ ಪರಿಹಾರ ಹೆಚ್ಚಾಗಿದೆ. ವಿಶ್ವಮಟ್ಟದಲ್ಲಿ ಆರ್ಥಿಕವಾಗಿ 5ನೇ ಸ್ಥಾನಕ್ಕೆ ಭಾರತ ಏರಿದೆ ಎಂದರು.

ಅವರು ಪ್ರಾರಂಭಿಸಿದ್ದನ್ನು ಅವರೇ ಉದ್ಘಾಟಿಸಿದ್ದಾರೆ. ನುಡಿದಂತೆ ನಡೆದು ತೋರಿಸಿದ್ದಾರೆ. ವಂದೇ ಭಾರತ್ ರೈಲು, ಹೊಸ ಸಂಸತ್ ಉದ್ಘಾಟನೆ ಆಗಿದೆ. ಅವರೊಬ್ಬ ದೂರದೃಷ್ಟಿ ಇರುವ ಕರ್ತವ್ಯನಿಷ್ಠೆಯ ನಾಯಕ ಎಂದು ತಿಳಿಸಿದರು. ಅಮೃತಕಾಲಕ್ಕೆ ಭದ್ರ ಅಡಿಪಾಯ ಹಾಕಿದ್ದು, 9 ವರ್ಷ ಅತ್ಯಂತ ನೆನಪಿಡುವ ಅಭಿವೃದ್ಧಿಯ ಅದ್ಭುತ ದಿನಗಳು ಎಂದು ವಿಶ್ಲೇಷಿಸಿದರು. ಅಮೃತಕಾಲದಲ್ಲಿ ಮೋದಿಜಿ ಅವರ ನಾಯಕತ್ವ ಮುಂದುವರಿಯುವ ಆಶಯವನ್ನು ವ್ಯಕ್ತಪಡಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್, ಮಾಜಿ ಸಚಿವರಾದ ಡಾ.ಸಿಎನ್.ಅಶ್ವತ್ಥನಾರಾಯಣ್, ಕೋಟ ಶ್ರೀನಿವಾಸ ಪೂಜಾರಿ, ಬೈರತಿ ಬಸವರಾಜು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *