‘ಅಧಿಕಾರಕ್ಕೆ ಬಂದ ಒಂದು ತಿಂಗಳೊಳಗೆ ವಿಸ್ತಾರವಾದ ಕೃತಿ ರಚಿಸಿ ಬಿಡುಗಡೆಗೆ ಸಿದ್ಧವಾದ ಮಾನ್ಯ ಮುಖ್ಯಮಂತ್ರಿಗಳು’ ಇದು ಯಾರೊ ಒಬ್ಬರು ಹೇಳುತ್ತಿರೋದಲ್ಲ, ಇವತ್ತಿನ ಸೋಷಿಯಲ್ ಮಿಡಿಯಾ ಪೂರಾ ಇದೇ ಚರ್ಚೆ. ಪುಸ್ತಕದ ಟೈಟಲ್ ಏನ್ ಗೊತ್ತಾ? ‘ಬಿಟ್ಟಿ ಭಾಗ್ಯಕ್ಕೆ ದಿನಕ್ಕೊಂದು ಕಂಡಿಷನ್‌ಗಳು’ ಅಂತ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರೊ ಮುಂಚೆ ಬಿಟ್ಟಿ ಭಾಗ್ಯಗಳನ್ನು ಘೋಷಣೆ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಅದರ ಆಧಾರದ ಮೇಲೆ ಬಹುಮತ ಪಡೆದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಈಗ ಅದನ್ನು ಪೂರೈಸೋಕೆ ಆಗದೇ ಹೆಣಗಾಡುತ್ತಿದೆ. ಬಿಟ್ಟಿ ಭಾಗ್ಯಗಳ ಮೇಲೆ ದಿನಕ್ಕೊಂದರಂತೆ ಕಂಡಿಷನ್‌ಗಳನ್ನು ಹಾಕ್ತಿದೆ. ಮೊದಲು 200 ಯುನಿಟ್ ‘ನಂಗೂ ಫ್ರೀ ನಿಂಗೂ ಫ್ರೀ’ ಅಂದವ್ರು, ಈಗ ವರ್ಷದಲ್ಲಿ ಬಳಸಿದ ಸರಾಸರಿ ಲೆಕ್ಕ ಹಾಕಿ, ಅದಕ್ಕೆ ತಕ್ಕಂತೆ ಫ್ರೀ ಕೊಡ್ತಿವಿ ಅಂತ ಕಂಡಿಷನ್ ಹಾಕಿದ್ರು. ಹೀಗೆ ಕಂಡಿಷನ್ ಲಿಸ್ಟು ದಿನಕ್ಕೊಂದರಂತೆ ಬೆಳಿತಿದೆ.
ಸರ್ಕಾರ ಕಂಡಿಷನ್‌ಗಳನ್ನೆಲ್ಲಾ ಸೇರಿಸಿ ಒಂದು ಪುಸ್ತಕ ಮಾಡಿರಬಹುದು ಅಂತ ಕೆಲವರ ಅಭಿಪ್ರಾಯ. ಮತ್ತೂ ಕೆಲವರು ಇದು ಯಾರೊ ವಿರೋಧಿಗಳು ಸರ್ಕಾರವನ್ನ ತರಾಟೆಗೆ ತೆಗೆದುಕೊಂಡಿರೋದಕ್ಕೆ ಮಾಡಿರಬಹುದು ಅಂತ ಹೇಳ್ತಿದ್ದಾರೆ. ಆದ್ರೆ ಹಲವರು, ಸರ್ಕಾರ ಬಂದ ಒಂದು ತಿಂಗಳೊಳಗೇ ಸಿದ್ದರಾಮಯ್ಯನವರು ಸಮಯ ಮಾಡಿಕೊಂಡು ಪುಸ್ತಕವನ್ನೇ ಬರೆದುಬಿಟ್ಟಿದ್ದಾರೆ ಅಂತ ಖುಷಿಪಟ್ಟಿದ್ದಾರೆ.
ಒಟ್ಟಿನಲ್ಲಿ ಫೇಸ್‌ಬುಕ್, ಟ್ವಿಟರ್, ವಾಟ್ಸಪ್ ಸ್ಟೇಟಸ್‌ಗಳಲ್ಲೆಲ್ಲಾ ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದ್ದೇ ಸುದ್ದಿ.
https://twitter.com/SharadaDiamond/status/1667091456757202944