ಕೇಂದ್ರ ಸರಕಾರದ ಪಿಎಂ ಜನ್‌ಮನ್ ಯೋಜನೆ ಅಡಿಯಲ್ಲಿ 2.75 ಕೋಟಿ ಅನುದಾನದಲ್ಲಿ ಕಡಬ ತಾಲೂಕಿನ ರಾಮಕುಂಜ, ಪೆರಾಬೆ, ಅಲಂಕಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪರಕ್ಕಾಲು ಕೊರಗ ಕಾಲನಿ ರಸ್ತೆಯು ಅಭಿವೃದ್ಧಿಗೊಳ್ಳಲಿದ್ದು ಇದರ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಭಾಗವಹಿಸಿದರು.
ನಂತರ ಮಾತನಾಡಿದ ಸಂಸದರು, ದೀನ್ ದಯಾಳ್ ಉಪಾಧ್ಯಾಯರ ಅಂತ್ಯೋದಯದ ಪರಿಕಲ್ಪನೆಯಂತೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ತಲುಪುವಂತಹ ದೂರದೃಷ್ಟಿಯ ಯೋಜನೆಯನ್ನು ಜಾರಿಗೆ ತಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ಅನಂತ ಧನ್ಯವಾದಗಳು ಎಂದರು.