ಸುವರ್ಣ ಆಜಾದ್ ಭಾರತ, ಸುವರ್ಣ ಕೆ.ಆರ್ ಎಂ ಶೀರ್ಷಿಕೆ ಅಡಿಯಲ್ಲಿ ರಕ್ಷಾ ಬಂಧನ್ ಕಾರ್ಯಕ್ರಮವನ್ನು ವಿದ್ಯಾರಣ್ಯಪುರಂನಲ್ಲಿ ಇರುವ ಮಾನ್ಯ ಶಾಸಕರಾದ ಎಸ್.ಎ.ರಾಮದಾಸ್ ರವರ ಕಛೇರಿಯಲ್ಲಿ ಇಂದು 18 ವರ್ಷದ ಮೇಲ್ಪಟ್ಟ ವಿದ್ಯಾರ್ಥಿನಿಯರೊಂದಿಗೆ ಸಂವಾದ ಕಾರ್ಯಕ್ರಮವು ನಡೆಯಿತು.
ಈ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಕಾರ್ಯಕ್ರಮವನ್ನು ಆಯೊಜಿಸಿದ ಮಹಿಳಾಮೋರ್ಚಾದವರಿಗೆ ಮತ್ತು ನೆರೆದಿದ್ದ ವಿದ್ಯಾರ್ಥಿನಿಯರಿಗೆ ಅಭಿನಂದನೆ ತಿಳಿಸುತ್ತಾ ಇಂದಿನ ಕಾರ್ಯಕ್ರಮ ಬಹಳ ವಿಶೇಷವಾದದ್ದು ಕಾರಣ ಇದೆ ಅದರ ಬಗ್ಗೆ ನೆರೆದಿದ್ದವರಿಗೆ ಶಾಸಕರು ಪ್ರಶ್ನಿಸಿದರು ಇಂದು ವ್ಯಾಸ ಪೂರ್ಣಿಮೆ ಇಂದು ಸಹೋದರ ಸಹೋದರಿಯರಿಗೆ ಬಹಳಾ ವಿಶೇಷ ಅಂದು ಭಾರತ ಮಾತೆಗೆ ಪುಷ್ಪಾರ್ಚನೆ ಸಲ್ಲಿಸುತ್ತಾ ನಾವು ಪೂರ್ಣಪ್ರಮಾಣದಲ್ಲಿ ನಿನ್ನ ರಕ್ಷಣೆಯಲ್ಲಿ ಇರುತ್ತೇವೆ ಎಂದು ಸಂಕಲ್ಪ ಮಾಡೋಣ, ಈ ಭಾರತದ ಭವಿಷ್ಯ ರೂಪಿಸುವ ನೀವಲ್ಲರು ತಾಯಿ ಭಾರತೀಯ ರಕ್ಷಣೆ ಮಾಡಲು ನಿಲ್ಲಬೇಕಿದ್ದು ನಿಮ್ಮೆಲ್ಲರ ರಕ್ಷಣೆಯ ಜವಾಬ್ದಾರಿ ನನ್ನದಾಗಿರುತ್ತದೆ.
ನಾವೆಲ್ಲಾ ಕಳೆದ 3 ದಶಕಗಳಿಂದ ಸಮಾಜ ಸೇವೆಯಲ್ಲಿ ನಿರಂತರವಾಗಿದ್ದೇವೆ ಮುಂದಿನ ಪೀಳಿಗೆಯಲ್ಲಿ ಸಮಾಜ ಸೇವೆ ಮಾಡುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕಿರುತ್ತದೆ. ಕಷ್ಟದಲ್ಲಿ ಇರುವವರಿಗೆ ನಮ್ಮ ಕೈಯಲ್ಲಿ ಆಗುವಂತಹ ಸೇವೆಯನ್ನು ಸಲ್ಲಿಸಬೇಕಿರುತ್ತದೆ. ಕೇಂದ್ರ ಸರ್ಕಾರದ , ರಾಜ್ಯ ಸರ್ಕಾರದ ಹಲವಾರು ಜನಪರ ಯೋಜನೆಗಳಿದ್ದು ಇಂತಹ ಯೋಜನೆಗಳನ್ನು ಅರ್ಹ ಸಾರ್ವಜನಿಕರಿಗೆ ತಲುಪಿಸುವ ಮೂಲಕ ಸೇವೆ ಸಲ್ಲಿಸಬಹುದು.
ನಾವು ಸ್ವತಂತ್ರ ಪಡೆಯುವುದರ ಹಿಂದೆ ಹಲವಾರು ತ್ಯಾಗಗಳಿದೆ ಲಕ್ಷಾಂತರ ಜನ ತ್ಯಾಗ ಮಾಡಿರುತ್ತಾರೆ. ರಾಜಕಾರಣ ಹಾಳಾದ್ದಲ್ಲಿ ದೇಶ ಹಾಳಾಗುವುದು, ದೇಶವೇ ಹಾಳಾದರೆ ಇನ್ನು ನಾವು ನೀವು ಇರಲು ಹೇಗೆ ಸಾದ್ಯ. ಇತ್ತಿಚಿನ ದಿನಗಳಲ್ಲಿ ಆಫ್ಘಾನ್ ದೇಶದಲ್ಲಿ ತಾಲಿಬಾನಿಗಳು ನಡೆಸುತ್ತಿರುವ ಅಟ್ಟಹಾಸವನ್ನು ಇಡೀ ಪ್ರಪಂಚವೇ ನೋಡುತ್ತಿದೆ ಅಲ್ಲಿಯ ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳ ಬಗ್ಗೆ ಪ್ರಪಂಚಾಧ್ಯಂತ ವಿರೋಧ ವ್ಯಕ್ತವಾಗಿದೆ. ನಾವು ಯಾವುದೇ ಸಂದರ್ಭ ಬಂದರೂ ಅನ್ಯಾಯದ ವಿರುದ್ದ ನಿಂತುಕೊಳ್ಳಬೇಕು ಎಂದು ತಿಳಿಸಿದರು.
ನೆರೆದಿದ್ದವರೆಲ್ಲರು ಭಾರತ್ ಮಾತಾ ಕಿ ಜೈ. ಎಂದು ಘೋಷಣೆ ಕೂಗಿ ತಮ್ಮ ತಮ್ಮ ಹೆಸರುಗಳನ್ನು ಹೇಳುತ್ತಾ …………….ಎಂಬ ಹೆಸರಿನವಳಾದ ನಾನು ಯುವ ಭಾರತೀಯಳಾಗಿ ದೇಶಪ್ರೇಮಿಯಾಗಿ, ದೇಶ ನಿರ್ಮಾಣಕ್ಕಾಗಿ ನನ್ನ ದಿನದ ಕೆಲವು ಸಮಯವನ್ನು ಮುಡಿಪಾಗಿಟ್ಟು ಕನಿಷ್ಟ 25 ಜನ ಯುವತಿಯರನ್ನು ದೇಶದ ಕಾರ್ಯಕ್ಕಾಗಿ ಜೋಡಿಸಿ ಭಾರತದ ರಕ್ಷಣೆಯನ್ನು ಮಾಡುತ್ತೇನೆಂದು ಪ್ರಮಾಣ ಮಾಡುತ್ತೇನೆ. ಎಂದು ಸಂಕಲ್ಪ ಮಾಡಿದರು.